ಚಿನ್ನ ಅಂದ್ರೆ ಭಾರತೀಯ ಕುಟುಂಬಗಳ ಆರ್ಥಿಕ ಭದ್ರತೆ. ಮದುವೆ, ಹಬ್ಬ, ಸಂಪ್ರದಾಯ — ಎಲ್ಲಕ್ಕೂ ಚಿನ್ನದ ಮಹತ್ವ ಇದೆ. ಆದರೆ ಇತ್ತೀಚೆಗೆ ಚಿನ್ನದ ಬೆಲೆ ಗಗನಕ್ಕೇರಿದೆ. ಹೊಸದಾಗಿ ಚಿನ್ನ ಖರೀದಿ ಮಾಡೋದು ಮಧ್ಯಮ ವರ್ಗದವರಿಗೆ ಕಷ್ಟವಾಗುತ್ತಿದೆ.
ಆದ್ರೆ ಒಂದು ಸತ್ಯ ಏನೆಂದರೆ — ನಿಮ್ಮ ಮನೆಯಲ್ಲಿ ಇರುವ ಹಳೆಯ ಒಡವೆಗಳು ಕಷ್ಟದ ಸಮಯದಲ್ಲಿ ನಿಮ್ಮನ್ನು ಉಳಿಸಬಲ್ಲವು.
ಹೌದು, ಗೋಲ್ಡ್ ಲೋನ್ ನಿಮ್ಮ ತುರ್ತು ಹಣದ ಅವಶ್ಯಕತೆಯನ್ನು ತಕ್ಷಣ ಪೂರೈಸುವ ಒಂದು ಸರಳ ಮಾರ್ಗ. ಆದರೆ ಜನರಲ್ಲಿ ಸಾಮಾನ್ಯವಾಗಿ ಇರುವ ಪ್ರಶ್ನೆ:
10 ಗ್ರಾಂ ಚಿನ್ನಕ್ಕೆ ಬ್ಯಾಂಕ್ ಎಷ್ಟು ಸಾಲ ಕೊಡುತ್ತೆ? ತಿಂಗಳಿಗೆ ಎಷ್ಟು ಬಡ್ಡಿ ಕಟ್ಟಬೇಕು?
ಈ ಪ್ರಶ್ನೆಗೆ ಸಂಪೂರ್ಣ ಉತ್ತರವನ್ನು ಸರಳವಾಗಿ ತಿಳಿಯೋಣ.
ಗೋಲ್ಡ್ ಲೋನ್ ಎಂದರೇನು?
ಗೋಲ್ಡ್ ಲೋನ್ ಅಂದ್ರೆ ನಿಮ್ಮ ಚಿನ್ನದ ಒಡವೆಗಳನ್ನು ಬ್ಯಾಂಕ್ ಅಥವಾ NBFC ಬಳಿ ತಾಕತ್ತು ಇಟ್ಟುಕೊಂಡು, ಅದರ ಮೌಲ್ಯದ ಮೇಲೆ ಹಣವನ್ನು ಸಾಲವಾಗಿ ಪಡೆಯುವುದು.
ನೀವು ಸಾಲ ವಾಪಸ್ ಕಟ್ಟಿದ ನಂತರ ನಿಮ್ಮ ಚಿನ್ನವನ್ನು ಮರಳಿ ಪಡೆಯಬಹುದು.
ಇದು ಪರ್ಸನಲ್ ಲೋನ್ಗಿಂತ ಬೇಗ ಸಿಗುತ್ತದೆ, ಕಡಿಮೆ ಡಾಕ್ಯುಮೆಂಟ್ ಬೇಕಾಗುತ್ತದೆ, ಮತ್ತು ಬಹುತೇಕ ಕಡಿಮೆ ಬಡ್ಡಿದರದಲ್ಲೇ ಸಿಗುತ್ತದೆ.
LTV (Loan To Value) ಅಂದ್ರೆ ಏನು?
ಬ್ಯಾಂಕ್ಗಳು ನಿಮ್ಮ ಚಿನ್ನದ ಸಂಪೂರ್ಣ ಮಾರುಕಟ್ಟೆ ಮೌಲ್ಯವನ್ನು ಸಾಲವಾಗಿ ಕೊಡೋದಿಲ್ಲ.
ಆರ್ಬಿಐ ನಿಯಮ ಪ್ರಕಾರ “Loan To Value (LTV)” ಅಂದ್ರೆ, ಚಿನ್ನದ ಮೌಲ್ಯದ ನಿರ್ದಿಷ್ಟ ಶೇಕಡಾವಷ್ಟು ಮಾತ್ರ ಸಾಲ ಕೊಡಲಾಗುತ್ತದೆ.
ಸಾಮಾನ್ಯವಾಗಿ ಹೀಗಿರುತ್ತದೆ.
ಸಾಮಾನ್ಯವಾಗಿ ಹೀಗಿರುತ್ತದೆ:
- ₹2.5 ಲಕ್ಷದವರೆಗೆ → 85%
- ₹5 ಲಕ್ಷದವರೆಗೆ → 80%
- ₹5 ಲಕ್ಷಕ್ಕಿಂತ ಹೆಚ್ಚು → 75%
ಅಂದ್ರೆ ನಿಮ್ಮ ಚಿನ್ನದ ಮೌಲ್ಯ ₹1,00,000 ಇದ್ದರೆ, ಗರಿಷ್ಠ ₹85,000 ಮಾತ್ರ ಸಿಗುತ್ತದೆ (85% LTV ಇದ್ದರೆ
10 ಗ್ರಾಂ ಚಿನ್ನಕ್ಕೆ ಎಷ್ಟು ಸಾಲ ಸಿಗುತ್ತದೆ?
ಇದನ್ನು ಉದಾಹರಣೆಯ ಮೂಲಕ ತಿಳಿಯೋಣ.
ನಿಮ್ಮ ಬಳಿ 22 ಕ್ಯಾರೆಟ್ 10 ಗ್ರಾಂ ಚಿನ್ನದ ಸರ ಇದೆ ಎಂದುಕೊಳ್ಳಿ.
ಹೀಗಾಗಿ, 10 ಗ್ರಾಂ ಚಿನ್ನದ ಮಾರುಕಟ್ಟೆ ಬೆಲೆ ₹1,40,000 ಇದ್ದರೆ:
85% LTV ಪ್ರಕಾರ → ₹1,19,000 ವರೆಗೆ ಸಾಲ ಸಿಗಬಹುದು.
ಆದರೆ ನೀವು ಗರಿಷ್ಠ ಮೊತ್ತವನ್ನೇ ತಗೊಳ್ಳಬೇಕೆಂಬ ನಿಯಮ ಇಲ್ಲ.
ನಿಮಗೆ ಬೇಕಾದಷ್ಟು ಮಾತ್ರ ಸಾಲ ತೆಗೆದುಕೊಳ್ಳಬಹುದು.
ಬ್ಯಾಂಕ್ಗಳು ಚಿನ್ನದ ಮೌಲ್ಯ ಹೇಗೆ ಲೆಕ್ಕ ಹಾಕುತ್ತವೆ?
ಚಿನ್ನದ ಶುದ್ಧತೆ (Purity) ಪರೀಕ್ಷೆ ಮಾಡುತ್ತಾರೆ
22 ಕ್ಯಾರೆಟ್ ಅಥವಾ 24 ಕ್ಯಾರೆಟ್ ಎಂದು ಪರಿಶೀಲನೆ
ಮಾರುಕಟ್ಟೆ ದರ ಆಧರಿಸಿ ಮೌಲ್ಯ ಲೆಕ್ಕ
ಕಲ್ಲು, ಮುತ್ತು, ಹವಳ ಇದ್ದರೆ ಅದರ ತೂಕ ಕಡಿತ
ಗಮನಿಸಿ — ಮೇಕಿಂಗ್ ಚಾರ್ಜ್ ಅಥವಾ ಡಿಸೈನ್ ಮೌಲ್ಯ ಪರಿಗಣಿಸಲಾಗುವುದಿಲ್ಲ.
ಶುದ್ಧ ಚಿನ್ನದ ತೂಕಕ್ಕೆ ಮಾತ್ರ ಬೆಲೆ ಕಟ್ಟಲಾಗುತ್ತದೆ.
ಗೋಲ್ಡ್ ಲೋನ್ ಬಡ್ಡಿದರ ಎಷ್ಟು?
ಬ್ಯಾಂಕ್ಗಳಲ್ಲಿ:
- 8.5% ರಿಂದ 12% ವರೆಗೆ
- NBFC ಸಂಸ್ಥೆಗಳಲ್ಲಿ:
- 12% ರಿಂದ 18% ವರೆಗೆ ಇರಬಹುದು
- ಅದರ ಕಾರಣ, ಕಡಿಮೆ ಬಡ್ಡಿಗೆ ಬ್ಯಾಂಕ್ ಆಯ್ಕೆ ಮಾಡೋದು ಉತ್ತಮ.
EMI vs Bullet Payment – ಯಾವುದು ಉತ್ತಮ?
ಬ್ಯಾಂಕ್ಗಳು ಎರಡು ಆಯ್ಕೆಗಳು ನೀಡುತ್ತವೆ:
EMI ಆಯ್ಕೆಪ್ರತಿ ತಿಂಗಳು EMI ಕಟ್ಟಬೇಕು.
ಉದಾಹರಣೆ:
₹1,00,000 ಸಾಲ
8.7% ಬಡ್ಡಿ
1 ವರ್ಷದ ಅವಧಿ ತಿಂಗಳಿಗೆ ಸುಮಾರು ₹7,000 EMI
Bullet Payment ಆಯ್ಕೆ
ತಿಂಗಳಿಗೆ ಬರೀ ಬಡ್ಡಿ ಮಾತ್ರ ಕಟ್ಟಬಹುದು.
₹1,00,000 ಮೇಲೆ 8.7% ಬಡ್ಡಿ → ವರ್ಷಕ್ಕೆ ₹8,700
ತಿಂಗಳಿಗೆ ಸುಮಾರು ₹725–₹850 (ಬ್ಯಾಂಕ್ ನಿಯಮದ ಪ್ರಕಾರ)
ಕೊನೆಯಲ್ಲಿ ಅಸಲು ಮೊತ್ತ ಒಟ್ಟಿಗೆ ಕಟ್ಟಬೇಕು.
ಚಿಕ್ಕ ಅವಧಿಗೆ ಸಾಲ ಬೇಕಾದವರಿಗೆ ಇದು ಸೂಕ್ತ ಆಯ್ಕೆ.
ಪ್ರೊಸೆಸಿಂಗ್ ಫೀಸ್ ಮತ್ತು ಇತರೆ ಶುಲ್ಕ
ಪ್ರೊಸೆಸಿಂಗ್ ಫೀಸ್ (0.5% – 2%)
ಮೌಲ್ಯಮಾಪನ ಶುಲ್ಕ
GST
ಸಾಲ ತಗೋಕೆ ಮುಂಚೆ ಈ ಶುಲ್ಕಗಳ ಬಗ್ಗೆ ಸ್ಪಷ್ಟವಾಗಿ ಕೇಳಿಕೊಳ್ಳಿ.
ಸಾಲ ಅವಧಿ ಎಷ್ಟು?
- ಸಾಮಾನ್ಯವಾಗಿ 6 ತಿಂಗಳು ರಿಂದ 1 ವರ್ಷ.
- ಕೆಲವು ಬ್ಯಾಂಕ್ಗಳಲ್ಲಿ 2–3 ವರ್ಷ ಅವಧಿ ಕೂಡ ಸಿಗಬಹುದು.
- ಅವಧಿ ಮುಗಿದ ಮೇಲೆ ಬೇಕಾದರೆ ರಿನ್ಯೂ ಮಾಡಿಕೊಳ್ಳಬಹುದು.
ಸಮಯಕ್ಕೆ ಕಟ್ಟದಿದ್ದರೆ ಏನಾಗುತ್ತದೆ?
- ಬ್ಯಾಂಕ್ ನೋಟಿಸ್ ಕೊಡುತ್ತದೆ
- ಬಡ್ಡಿ ಹೆಚ್ಚಾಗಬಹುದು
- ಕೊನೆಗೆ ಚಿನ್ನವನ್ನು ಹರಾಜು ಮಾಡಬಹುದು
- ಆದ್ದರಿಂದ ನಿಮ್ಮ ಸಾಮರ್ಥ್ಯಕ್ಕೆ ತಕ್ಕಷ್ಟು ಮಾತ್ರ ಸಾಲ ಮಾಡಿ.
ಗೋಲ್ಡ್ ಲೋನ್ vs ಪರ್ಸನಲ್ ಲೋನ್
ವಿಷಯ
ಗೋಲ್ಡ್ ಲೋನ್
ಪರ್ಸನಲ್ ಲೋನ್
ಬಡ್ಡಿ
ಕಡಿಮೆ
ಹೆಚ್ಚು
ಡಾಕ್ಯುಮೆಂಟ್
ಕಡಿಮೆ
ಹೆಚ್ಚು
ಅನುಮೋದನೆ
ವೇಗವಾಗಿ
ಸಮಯ ತೆಗೆದುಕೊಳ್ಳುತ್ತದೆ
ಅಪಾಯ
ಚಿನ್ನ ಕಳೆದುಕೊಳ್ಳುವ ಸಾಧ್ಯತೆ
ಕ್ರೆಡಿಟ್ ಸ್ಕೋರ್ ಮೇಲೆ ಪರಿಣಾಮ
ಗೋಲ್ಡ್ ಲೋನ್ ತೆಗೆದುಕೊಳ್ಳುವ ಮುನ್ನ ಗಮನಿಸಬೇಕಾದ ವಿಷಯಗಳು
- ಕಡಿಮೆ ಬಡ್ಡಿದರ ಇರುವ ಬ್ಯಾಂಕ್ ಆಯ್ಕೆ ಮಾಡಿ
- LTV ಎಷ್ಟು ಕೊಡುತ್ತಿದ್ದಾರೆ ಎಂದು ಪರಿಶೀಲಿಸಿ
- ಪ್ರೊಸೆಸಿಂಗ್ ಫೀಸ್ ಕೇಳಿ
- EMI ಅಥವಾ Bullet ಆಯ್ಕೆ ಸರಿಯಾಗಿ ನಿರ್ಧರಿಸಿ
- ಸಾಲದ ಅವಧಿ ಗಮನಿಸಿ
ಗೋಲ್ಡ್ ಲೋನ್ ಯಾರಿಗೆ ಸೂಕ್ತ?
- ತುರ್ತು ವೈದ್ಯಕೀಯ ವೆಚ್ಚ
- ವ್ಯವಹಾರಕ್ಕೆ ತಾತ್ಕಾಲಿಕ ಹಣ
- ಶಿಕ್ಷಣ ವೆಚ್ಚ
- ಅಲ್ಪ ಅವಧಿಯ ಹಣಕಾಸು ಅವಶ್ಯಕತೆ
- ದೀರ್ಘಕಾಲದ ಸಾಲಕ್ಕೆ ಇದು ಸೂಕ್ತ ಆಯ್ಕೆ ಅಲ್ಲ.
ಕೊನೆ ಮಾತು
ಗೋಲ್ಡ್ ಲೋನ್ ತುರ್ತು ಸಂದರ್ಭಗಳಲ್ಲಿ ಉತ್ತಮ ಆರ್ಥಿಕ ಸಾಧನ.
ಆದ್ರೆ ಲೆಕ್ಕಾಚಾರ ತಿಳಿದುಕೊಂಡು, ಬಡ್ಡಿ, EMI, ಶುಲ್ಕ ಎಲ್ಲವನ್ನೂ ಗಮನಿಸಿ ನಿರ್ಧಾರ ಮಾಡಿ.
ಚಿನ್ನ ನಿಮ್ಮ ಆಸ್ತಿ.
ಅದನ್ನು ಸುರಕ್ಷಿತವಾಗಿ ಬಳಸಿ, ಸಮಯಕ್ಕೆ ಸಾಲ ಕಟ್ಟಿದರೆ ಅದು ನಿಮ್ಮ ಆರ್ಥಿಕ ಭದ್ರತೆ ಆಗುತ್ತದೆ.